ಚಂದ್ರಕಾಂತ ಕರದಳ್ಳಿಯವರು (೨೫ ಆಗಸ್ಟ್ ೧೯೫೨ - ೧೯ ಡಿಸೆಂಬರ್ ೨೦೧೯) ಕನ್ನಡದ ಒಬ್ಬರು ಬರಹಗಾರರು. ವಿಶೇಷವಾಗಿ ಮಕ್ಕಳ ಸಾಹಿತ್ಯವನ್ನು ಹೆಚ್ಚು ರಚಿಸಿದ್ದಾರೆ. == ಜೀವನ == ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ವೃತ್ತಿಯಿದ ಶಿಕ್ಷಕರಾಗಿದ್ದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಮೂವತ್ತಮೂರು ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. == ಸಾಹಿತ್ಯ ಜೀವನ == ಕರದಳ್ಳಿಯವರು ಸುಮಾರು ೫೦ ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳ ಸಾಹಿತ್ಯ ಎನ್ನುವುದು ವಿಶೇಷ. ಮಕ್ಕಳ ಸಾಹಿತ್ಯದಲ್ಲಿ ಇವರು 5 ಕಥಾ ಸಂಕಲನ, 6 ಕವನ ಸಂಕಲನ, 6 ಮಕ್ಕಳ ಕಾದಂಬರಿ, ಎರಡು ಶಿಶುಪ್ರಾಸಗಳು, ಸಾಹಿತ್ಯ ಅಕಾಡೆಮಿ ಸಂಪಾದನೆ ಸೇರಿದಂತೆ ಒಟ್ಟು ೫೦ ಕೃತಿಗಳು ಹೊರಬಂದಿವೆ. ಇದರಲ್ಲಿ ಹಾಡು, ಕಥೆ, ಜೀವನಗಾಥೆಗಳು, ಒಗಟುಗಳ ಸಂಗ್ರಹ ಎಲ್ಲಾ ಸೇರಿವೆ. ಅವರ ಕೆಲ ಜನಪ್ರಿಯ ಕೃತಿಗಳೆಂದರೆ, ನಲಿದಾಡು ಬಾ ನವಿಲೆ ಚಂದಮಾಮ ಒಬ್ಬನೆ ಇದ್ದೀಯಾ? ಉಪ್ಪಿನಗೊಂಬೆಯ ಹುಟ್ಟೂರು ಆಕಾಶವೇಕೆ ಮೇಲಿದೆ? ಉಪ್ಪಿನ ಗೊಂಬೆ ಮಾಯದ ಗಂಟೆ ಕಾಡು ಕನಸಿನ ಬೀಡಿಗೆ ಬಯಲು ಸೀಮೆಯಿಂದ ಕರಾವಳಿಗೆ ಮಹಾಜಿಪುಣ ಮೈದಾಸ ಸಗರಾದ್ರಿ ಚಾರಣ ಸೋಲೇ ಇಲ್ಲ ಗೆಲುವೇ ಎಲ್ಲ ಗಿರಿಸಿರಿ ಮನದಮಾತು == ಪ್ರಶಸ್ತಿ, ಗೌರವಗಳು == ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ' (೨೦೧೯) ಸುರಪುರದಲ್ಲಿ ನಡೆದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು (೨೦೧೦) ಯಾದಗಿರಿ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ (೨೦೧೫) ರಾಜ್ಯೋತ್ಸವ ಪ್ರಶಸ್ತಿ (೨೦೧೯) ಸಂಕ್ರಮಣ ಸಾಹಿತ್ಯ, ಶಿಕ್ಷಣ ಸಿರಿ, ಸಾಕ್ಷಿ ಮಕ್ಕಳ ಸಾಹಿತ್ಯ, ಸಿಶು ಸಂಗಮೇಶ ದತ್ತಿ, ಸಿದ್ಧಾರ್ಥ ಮಕ್ಕಳ ಸಾಹಿತ್ಯ, ಮಕ್ಕಳ ಚಂದಿರ, ಅಕ್ಷರಲೋಕದ ನಕ್ಷತ್ರ ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಗೌರವವಗಳು == ಉಲ್ಲೇಖಗಳು == == ಹೊರಸಂಪರ್ಕ ಕೊಂಡಿಗಳು ==